Bangalore Metropolitan Transport Corporation [BMTC] — Bad Behavior by BMTC Driver

Address:Nelamangala

ನನ್ನ ಮಗಳು ಓದುತ್ತಿರುವ ಯಲಹಂಕದ ಶಾಲೆಗೆ ಬಸ್ ಹತ್ತಿಸಲು ಬೈಕಿನಲ್ಲಿ ನೆಲಮಂಗಲ ಬಸ್ಟಾಂಡಿಗೆ ಹೋಗುತ್ತಿದ್ದೆ. ಆದರೆ ಯಲಹಂಕದ ಬಸ್ ನೆಲಮಂಗಲ ಪೊಲೀಸ್ ಠಾಣೆಯ ಸಮೀಪದ ಬಸ್ ಸ್ಟಾಂಡ್ ಅಲ್ಲಿ ನಿಲ್ಲಿಸಿ, ಮುಂದೆ ಚಲಿಸುವಷ್ಟರಲ್ಲಿ ನಾನು ಬಸ್ ಸಮೀಪ ಬಂದು ನಿಲ್ಲಿಸಲು ರಿಕ್ವೆಸ್ಟ್ ಮಾಡಿದೆ. 'ನಿಲ್ಲಿಸಲು ಆಗಲ್ಲ' ಎಂದ ಆ ಡ್ರೈವರ್ ನಿಲ್ಲಿಸಲಿಲ್ಲ. ಬೈಕ್ ತಿರುಗಿಸಿಕೊಂಡು ದೊಡ್ಡಬಳ್ಳಾಪುರ ರಸ್ತೆಗೆ ತಿರುಗುವಷ್ಟರಲ್ಲಿ ಡಿಯೋ ಮೊಪೆಡ್ ನನ್ನ ಬೈಕನ್ನು ಉಜ್ಜಿಕೊಂಡು ಹೋಯಿತು. ಪರಸ್ಪರ ಇಬ್ಬರೂ ಕ್ಷಮೆ ಕೇಳಿಕೊಂಡು ಮುಂದೆ ಹೋದೆ. ಬಸವನಹಳ್ಳಿ ಹತ್ತಿರ ಬಸ್ ಅನ್ನು ಮುಂದೆ ಹಾಕಿ 'ಸ್ಕೂಲ್ ಮಗು, ಗಂಟೆಗೊಂದು ಬಸ್ ಇದೆ, ನಿಲ್ಸೋಕೆ ಆಗಲ್ವ?' ಅಂದರೆ, 'ನೀವು ಕೇಳಿದ ಕಡೆಗೆಲ್ಲ ನಿಲ್ಸೋಕೆ ಆಗಲ್ಲ' ಎಂದು ಮಗಳು ಬೈಕಿಂದ ಇಳಿಯುವಷ್ಟರಲ್ಲಿ ಮುಂದಕ್ಕೆ ಚಲಿಸಿಯೇಬಿಟ್ಟ. ಮತ್ತೆ ಚೇಸ್ ಮಾಡುವ ಭರದಲ್ಲಿ ಮತ್ತೊಂದು ಅಪಘಾತದಿಂದ ತಪ್ಪಿಸಿಕೊಂಡು ಬಸ್ ಹತ್ತಿಸಿ ಬಂದೆ. ರಕ್ತ ಹೇಗೆ ಕುದಿಯುತ್ತಿದೆ ಎಂದರೆ, ಕಾನೂನಿಗೆ ಗೌರವ ಕೊಟ್ಟು ಸುಮ್ಮನೇ ಬಂದೆ. ಅದೂ ಎರಡು ಅಪಘಾತಗಳಿಂದ ಬಚಾವ್ ಆಗಿ.
ನೆಲಮಂಗಲದಿಂದ ಗಂಟೆಗೊಂದು ಬಸ್ ಇದೆ. ಅದರ ವೇಳಾಪಟ್ಟಿಯ ಅನುಸಾರವಾಗಿಯೇ ನಾನು ದಿನವೂ ಬಸ್ ಹತ್ತಿಸಲು ಹೋಗುತ್ತೇನೆ. ಆದರೆ ಈ ಈಡಿಯಟ್ ಡ್ರೈವರ್ ಐದು ನಿಮಿಷಗಳ ಮೊದಲೇ ಹೊರಟಿದ್ದಾನೆ. ರಿಕ್ವೆಸ್ಟ್ ಮಾಡಿಕೊಂಡರೂ ನಿಲ್ಲಿಸಲಿಲ್ಲ.
ಇಂತಹ ಜನವಿರೋಧಿ ಡ್ರೈವರ್‌ಗಳಿಂದ ಬಿಎಂಟಿಸಿಗೆ ಅವಮಾನ.
-ವಿ.ಆರ್.ಸಿ.
Bus Registration no. KA57 F 3134
Route No. 407 Nelamangala to Yelahanka
Time 8:30AM
+1 photos
Was this information helpful?
No (0)
Yes (0)
Bangalore Metropolitan Transport Corporation [BMTC] customer support has been notified about the posted complaint.
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Bangalore Metropolitan Transport Corporation [BMTC]
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    49%
    Complaints
    2853
    Pending
    0
    Resolved
    1389
    Bangalore Metropolitan Transport Corporation [BMTC] Phone
    +91 80 2253 7596
    Bangalore Metropolitan Transport Corporation [BMTC] Address
    BTS Bus Depot Rd, Shanti Nagar, Bengaluru, India - 560027
    View all Bangalore Metropolitan Transport Corporation [BMTC] contact information