Corporation Bank — bank officials not issuing deposit certificate for last three years

ರಿಗೆ,
ಒಂಬುಡ್ಸ್ಮನ್
ಕಾರ್ಪೊರೇಷನ್ ಬ್ಯಾಂಕ್

ವಿಷಯ: ಕಾರ್ಪೊರೇಷನ್ ಬ್ಯಾಂಕ್ ಸಮಾದೇವಿ ಗಲ್ಲಿಶಾಖೆಯ ಸಿಬ್ಬಂದಿ ಠೇವಣಿ ಹಣದ ಪ್ರಮಾಣಪತ್ರ ಕೊಡದಿರುವ ಬಗ್ಗೆ

ಮಾನ್ಯರೆ,

ನಮ್ಮ ತಂದೆ ಮಲ್ಲಪ್ಪ ಮಸಾನೆ ಅವರು 13 ಜೂನ್ 2014ರಂದು ಹುಬ್ಬಳ್ಳಿಯ ಕಾರ್ಪೊರೇಷನ್ ಬ್ಯಾಂಕ್ ವಿದ್ಯಾನಗರ ಶಾಖೆಯಲ್ಲಿ 1 ಲಕ್ಷ ರೂಪಾಯಿ ಹಣ ಠೇವಣಿ (ಕೆಸಿಸಿ/60/[protected] ಇಟ್ಟಿದ್ದರು. ಹುಬ್ಬಳ್ಳಿಯ ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಬೀದರ್ ಜಿಲ್ಲಾ ವರದಿಗಾರರಾಗಿ ವರ್ಗಾವಣೆಯಾದ ನಂತರ ತಂದೆಯವರು ಬೆಳಗಾವಿಯಲ್ಲಿ ಬಂದು ನೆಲೆಸಿದರು. ಹೀಗಾಗಿ ನನ್ನ (ಚಂದ್ರಕಾಂತ ಮಸಾನೆ) ಹಾಗೂ ತಂದೆ ಮಲ್ಲಪ್ಪ ಅವರ ಹೆಸರಲ್ಲಿ ಇದ್ದ ಜಂಟಿ ಉಳಿತಾಯ ಖಾತೆಯನ್ನು ಬೆಳಗಾವಿಗೆ ವರ್ಗಾವಣೆ ಮಾಡಲು 2015ರಲ್ಲಿ ಸಮಾದೇವಿ ಗಲ್ಲಿಯ ಬ್ಯಾಂಕ್ನಲ್ಲಿ application ಸಲ್ಲಿಸಿದ್ದೆವು.

ಬ್ಯಾಂಕಿನ ಸಿಬ್ಬಂದಿ ಹುಬ್ಬಳಿ ಬ್ಯಾಂಕಿನ ಪಾಸ್ಬುಕ್ ಪಡೆದು ಹೊಸ ಪಾಸ್ ಕೊಟ್ಟರು. ಆದರೆ ಅದನ್ನು ಸಿಂಗಲ್ ಅಕೌಂಟ್ ಆಗಿ ಪರಿವರ್ತಿಸಿದರು.. ವಿದ್ಯಾನಗರ ಶಾಖೆಯ ಠೇವಣಿಪತ್ರ ಪಡೆದು ಬೇರೆ ಸಮಾದೇವಿ ಬ್ಯಾಂಕಿನ ಠೇವಣಿಪತ್ರ ಕೊಡುವುದಾಗಿ ಹೇಳಿ ವಾಪಾಸ್ ಪಡೆದರು. ಸಾಪ್ಟ್ವೇರ್ ಅಪಡೇಟ್ ಮಾಡುತ್ತಿರುವ ಕಾರಣ ಸ್ಪಲ್ಪ ವಿಳಂಬವಾಗಿದೆ ಎಂದು ಹೇಳುತ್ತ ಎರಡು ತಿಂಗಳು ಕಳೆದರು. ಈಗ ಮೂರು ವಷ9 ಕಳೆದಿವೆ. ಠೇವಣಿಪತ್ರ ಕೊಟ್ಟಿಲ್ಲ. ತಂದೆಯ ಹೆಸರಿನಲ್ಲಿ ಹಣ ಇದ್ದರೂ ಹಣ ವಾಪಾಸ್ ಪಡೆದುಕೊಂಡಿದ್ದೀರಿ ಎಂದು ಬ್ಯಾಂಕಿನ ಸಿಬ್ಬಂದಿ ವಿದುಲಾ ಹೇಳುತ್ತಿದ್ದಾರೆ. ನಮಗೆ ಆಘಾತ ಉಂಟು ಮಾಡಿದ್ದಾರೆ.

ನಮ್ಮ ತಂದೆಯವರು ಅನೇಕ ಬಾರಿ ಬ್ಯಾಂಕಿಗೆ ಬಂದು ಹೋಗಿದ್ದಾರೆ. ನಾನು ಎರಡು ಬಾರಿ (2018 ಸೆಪ್ಟೆಂಬರ್ 18, 19) ಬ್ಯಾಂಕಿಗೆ ಬಂದು ಹೋಗಿದ್ದೇನೆ. ನನಗೂ ಅಕೌಂಟ್ ಕ್ಲೋಸ್ ಎಂದು ಬರೆದುಕೊಟಿದ್ದಾರೆ. ಗಾಬರಿಕೊಂಡು ಚೀಫ್ ಮ್ಯಾನೇಜರ್ ಕಡಿಯಾಳ ಚಂದ್ರಶೇಖರ ಅವರ ಕ್ಯಾಬಿನ್ಗೆ ಹೋಗಿ ಕೇಳಿದೆ. ಅವರು ವಿದುಲಾ ಅವರೊಂದಿಗೆ ಮಾತನಾಡಿ ಹಣ ಪಡೆಯಲಾಗಿದೆ ಎಂದು ಹೇಳಿದರು. ನಿಮ್ಮ ಮೂಲ ಠೇವಣಿ ಹುಬ್ಬಳ್ಳಿಯ ವಿದ್ಯಾನಗರ ಶಾಖೆಯಲ್ಲಿದೆ. ಅಲ್ಲಿಯೇ ಹೋಗಿ ವಿಚಾರಿಸಿ ಎಂದು ಹೇಳಿ ಕಳಿಸಿದರು. ಮರುದಿನ ಭೇಟಿಯಾದಾಗಲೂ ಈಗಾಗಲೇ ನಿಮಗೆ ಹೇಳಿದ್ದೇವೆ ಅಲ್ಲ ಎಂದು ಆವೇಶದಿಂದ ಹೇಳಿದರು. ಹಣ ವಾಪಾಸ್ ಪಡೆದಿದ್ದರೆ ಯಾವ ಅಕೌಂಟ್ಗೆ ಜಮಾ ಆಗಿದೆ ಎಂದು ಕೇಳಿದರೂ ಮಾಹಿತಿಕೊಡಲು ಕೊಡಲಿಲ್ಲ. ಕಂಪ್ಯೂಟರ್ನಲ್ಲಿ ಯಾವುದೇ ದಾಖಲೆ ಇಲ್ಲ ಎಂದು ಏನೂ ಹೇಳದೆ ಮೌನವಾಗಿ ಕುಳಿತುಕೊಳ್ಳತೊಡಗಿದ್ದರಿಂದ ನಾನು ಹುಬ್ಬಳ್ಳಿಗೆ ಹೋಗಲು ನಿರ್ಧರಿಸಿದೆ.

ವಯೋವೃದ್ಧ ತಂದೆಯನ್ನು ನವೆಂಬರ್ 9 ರಂದು ಹುಬ್ಬಳ್ಳಿಯ ವಿದ್ಯಾನಗರ ಶಾಖೆಯ ಬ್ಯಾಂಕಿಗೆ ಹೋಗಿ ವಿಚಾರಿಸಿದೆ. ಹುಬ್ಬಳ್ಳಿ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೌರವದಿಂದ ನನ್ನನ್ನು ಕೂರಿಸಿ ಅರ್ಧಗಂಟೆ ಯಲ್ಲಿ ಕಂಪ್ಯೂಟರ್ನಲ್ಲಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿದರು. ಠೇವಣಿ ಬೆಳಗಾವಿ ಸಮಾದೇವಿಗಲ್ಲಿ ಶಾಖೆಯಲ್ಲಿ ಇದೆ. ನಿಮ್ಮ ಜಂಟಿ ಖಾತೆಯೂ ಬೆಳಗಾವಿಗೆ ವಗ9ವಾಗಿದೆ. ಎಲ್ಲ ದಾಖಲೆಗಳು ಸರಿಯಾಗಿ ಇವೆ. ಮತ್ತೊಮ್ಮೆ ಬೆಳಗಾವಿಗೆ ಹೋಗಿ ವಿಚಾರಿಸಿ ಸವiಜಾಯಿಸಿ ಹೇಳಿ ನಕಲು ಪ್ರತಿಗಳ ಮೇಲೆ ಎಲ್ಲವನ್ನೂ ಉಲ್ಲೇಖಿಸಿ ಕಂಪ್ಯೂಟರ್ ಸ್ಕ್ರೀನ್ನಲ್ಲಿ ಎಲ್ಲವನ್ನೂ ತೋರಿಸಿ ಸಮಾಧಾನ ಪಡಿಸಿದರು. ಅವರಿಗೆ ನನ್ನ ಕೃತಜ್ಞಜೆಗಳು. (2019ರ 13 ಜೂನ್ನಲ್ಲಿ ಮೆಚುರಿಟಿ ಆಗಲಿರುವ ಹಣ 1, 49, 097)

ಮರಳಿ ಸಮಾದೇವಿ ಗಲ್ಲಿಗೆ ಬಂದಾಗ ಮತ್ತೆ ಅದೇ ಉತ್ತರ. ಶೋಧ ಮಾಡಲು ನಾಲ್ಕು ದಿನ ಟೈಮ್ ಕೊಡಿ ಎಂದು ಕಳಿಸಿದ್ದಾರೆ. ಫಿಕ್ಸ್ ಡಿಪೋಸಿಟ್ ಪ್ರಮಾಣಪತ್ರ ಕೊಡಲು ಮೂರು ವಷ9 ಬೇಕೆ? 80 ವಷ9ದ ತಂದೆಯವರು ಪುಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೆಂಬರ್ 9 ರಂದು ಬ್ಯಾಂಕಿಗೆ ಕರೆದುಕೊಂಡು ಬಂದು ಪ್ರಭಾರ ವ್ಯವಸ್ಥಾಪಕರಿಗೆ ತಂದೆಯವನ್ನು ತೋರಿಸಿದ್ದೇನೆ. ನಾನು ಬೀದರ್ನಲ್ಲಿ ಕೆಲಸ ಮಾಡುತ್ತಿರುವೆ. ಬ್ಯಾಂಕಿನ ಸಿಬ್ಬಂದಿ ಠೇವಣಿ ಪತ್ರಕೊಡಲು ಸತಾಯಿಸುತ್ತಿದ್ದಾರೆ. ಹಣ ತೆಗೆದುಕೊಂಡಿದ್ದೀರಿ ಎಂದೂ ಸಹ ಹೇಳುತ್ತಿದ್ದಾರೆ. ಅಧಿಕಾರಿಗಳೇ ಗ್ರಾಹಕರ ದಾರಿ ತಪ್ಪಿಸಿದರೆ ಯಾರಿಗೂ ಕೇಳಬೇಕು.
ಮೂರು ವಷ9ಗಳ ಅವಧಿಯಲ್ಲಿ ತಂದೆಯವರು, ಪುಣೆಯಿಂದ ನಾನು ಬೀದರ್ನಿಂದ 10, 12 ಸಾರಿ ಬ್ಯಾಂಕಿಗೆ ಓಡಾಡಿ ಸಾಕಾಗಿದೆ. ಗ್ರಾಹಕರಿಗೆ ತೊಂದರೆ ಕೊಡುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವವರು ಯಾರು ಇಲ್ಲವೆ ಯಾರಿಗೆ ಕೇಳಬೇಕು. ದಯವಿಟ್ಟು ವಿಚಾರಣೆ ನಡೆಸಿ ನಮಗೆ ತಪ್ಪು ಮಾಹಿತಿ ನೀಡುತ್ತಿರುವ ಬ್ಯಾಂಕಿನ ಜಮಾ ವಿಭಾಗದ ವಿದುಲಾ ಹಾಗೂ ಚೀಫ್ ಮ್ಯಾನೇಜರ್ ಕಡಿಯಾಳ ಚಂದ್ರಶೇಖರ ವಿರುದ್ಧ ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕು. ಠೇವಣಿಪ್ರಮಾಣಪತ್ರ ಕೊಡಿಸಬೇಕು. ಅನಗತ್ಯವಾಗಿ ನಮ್ಮನ್ನು ಅಲೆದಾಡಿಸಿದ ಕಾರಣಕ್ಕೆ ಅದರ ವೆಚ್ಚ ಭರಿಸುವಂತೆ ಬ್ಯಾಂಕಿನವರಿಗೆ ಆದೇಶ ಮಾಡಬೇಕು.

ಬ್ಯಾಂಕಿನಲ್ಲಿ ಬೇಜಾಬ್ವಾರಿಯುತ ವ್ಯಕ್ತಿಗಳು ಇರುವ ಕಾರಣ ಬ್ಯಾಂಕಿಗೆ ಕೆಟ್ಟು ಹೆಸರು ಬರುತ್ತಿದೆ. ಸಿಬ್ಬಂದಿ ಕುಳಿತುಕೊಳ್ಳುವ ಸ್ಥಳದಲ್ಲಿ ನಾಮಫಲಕ ಇಲ್ಲ. ಕೆಲ ಸಿಬ್ಬಂದಿ ವತ9ನೆ ಸರಿ ಇಲ್ಲ. ಗ್ರಾಹಕರೊಂದಿಗ ಹೇಗೆ ನಡೆದುಕೊಳ್ಳಬೇಕು ಎಂದು ಒಮ್ಮೆ ಅವರಿಗೆ ನಿದೇಶನ ಕೊಡಿ. ಗ್ರಾಹಕರ ಹಿತದೃಷ್ಟಿಯಿಂದ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

ಕಾರ್ಪೊರೇಷನ್ ಬ್ಯಾಂಕಿನ ನೊಂದ ಗ್ರಾಹಕ
ಚಂದ್ರಕಾಂತ ಮಸಾನೆ,
[protected], [protected]
+2 photos
Was this information helpful?
No (0)
Yes (0)
Corporation Bank customer support has been notified about the posted complaint.
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Corporation Bank
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    14%
    Complaints
    1055
    Pending
    0
    Resolved
    147
    Corporation Bank Phone
    +91 80 2660 2500
    +91 80 2660 0587
    Corporation Bank Address
    Fts Centreshresta Bhumi, Door No: 87, K R Road, Bangalore, Karnataka, India - 560004
    View all Corporation Bank contact information