Election Commission Of India [Eci] — election commission rules and regulations violation
S
S Chandra Dss
from Bengaluru, Karnataka
Address:
KARNATAKA
ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿರುವುದರಿಂದ ಸಿಬ್ಬಂಧಿ ಮತ್ತು ಆಡಳಿತ ಸುಧಾರಣೆ ಇಲಾಖೆ ವಿಷೇಶ ರಾಜ್ಯ ಪತ್ರಕ್ಕೆ ನೋಟಿಫಿಕೇಷನ್ ನಂಬರ್., dpar 108 ವಿ.ಚು 2018 ಬೆಂಗಳೂರು ದಿನಾಂಕ 10/10/2018ರಲ್ಲಿ ಯಾವುದೇ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಪ್ರೇರೇಪಿಸುವಂತಹ ಪ್ರಚಾರವನ್ನು ವಾಟ್ಸ್ ಆ್ಯಪ್, ಫೇಸ್ಬುಕ್, ಟ್ವಿಟರ್ ಮುಂತಾದವುಗಳಲ್ಲಿ ಚುನಾವಣಾ ಪ್ರಚಾರ ಮಾಡಿದರೆ ಪೋಸ್ಟ್ ಮಾಡಿದ ವ್ಯಕ್ತಿ ಮೇಲೆ ಸೆಕ್ಷನ್ 126 rp ಆ್ಯಕ್ಟ್ ಅಡಿ ಕೇಸ್ ದಾಖಲಿಸಿ ಅಪರಾಧ ಎಂದು ತಿಳಿಸಿರುತ್ತದೆ.ಇಲ್ಲೊಬ್ಬ raffi dms ಎಂಬುವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬ್ಯಾಟರಾಯನಪುರ ವಿ.ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಲು ಪೋಸ್ಟ್ ಮಾಡಿರುವುದು ಕಂಡುಬಂದಿರುತ್ತದೆ.ಆದ್ದರಿಂದ ತಾವು ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಸ್ವಂಯಂ ಪ್ರೇರಿತ ಸುಮೋಟೋ ಆಧಾರದಲ್ಲಿ ತಾವೇ ದೂರುದಾರರಾಗಿ ಕಾನೂನು ರೀತಿಯ ಕ್ರಮ ಜರುಗಿಸಲು ತಮ್ಮಲ್ಲಿ ದೂರು ಸಲ್ಲಿಸಿದೆ.ಹಾಗೂ ಫೇಸ್ ಬುಕ್ ಅಕೌಂಟ್ ಗಳಲ್ಲಿ ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳು ಅವರವರ ಫೇಸ್ ಬುಕ್ ಅಕೌಂಟ್ಗಳ ಮುಖಾಂತರ ಮತ ಚಲಾವಣೆಗೆ ತಮ್ಮ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದು ಚುನಾವಣಾ ನೀತಿಸಂಹಿತಿ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಿರುತ್ತದೆ.ಆದ್ದರಿಂದ ತಾವು ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಅಕೌಂಟ್ ನಿಂದ ಪೋಸ್ಟ್ ಆಗುವ ಪೋಸ್ಟ್ ಗಳ ಮೇಲೆ ನಿಗಾ ವಹಿಸಿ ಕಾನೂನು ರೀತಿ ಕ್ಕಮ ಜರುಗಿಸಿ ತಮ್ಮ ಕರ್ತವ್ಯ ಪಾಲನೆ ಮಾಡುವಿರೆಂದು ನಂಬಿರುತ್ತೇವೆ.ಈ ಪ್ರಕರಣದಲ್ಲಿ ತಮಗೆ ಮಾಹಿತಿದಾರನಾದ ನನ್ನ ವಿವರಗಳನ್ನು ಗೌಪ್ಯವಾಗಿಡಲು ತಮ್ಮಲ್ಲ ಕಳಕಳಿಯ ಮನವಿ ಸಲ್ಲಿಸಿದೆ.ನನ್ನ ಬಗ್ಗೆ ಮೇಲ್ಕಂಡಂತೆ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರು ಆರೋಪಿಗಳಿಗೆ ಮಾಹಿತಿ ಸಿಕ್ಕಲ್ಲಿ ನನ್ನ ಹಾಗೂ ನನ್ನ ಕುಟುಂಬಕ್ಕೆ ತೊಂದರೆ ಇರುವ ಕಾರಣ ತಾವು ಪ್ರಮುಖ್ಯತೆ ನೀಡುವ ಅವಶ್ಯಕತೆ ಇರುತ್ತದೆ.ಆದ್ದರಿಂದ ನನ್ನ ಬಗ್ಗೆ ಗೌಪ್ಯತೆ ಕಾಪಾಡುವುದು ತಮ್ಮ ಜವಾಬ್ದಾರಿಯೂ ಸಹ ಆಗಿರುತ್ತದೆ.
+2 photos
Was this information helpful?
No (0)
Yes (0)
Election Commission of India [ECI] customer support has been notified about the posted complaint.
Add a Comment
Share
Related Election Commission of India [ECI] reviews
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment