Karnataka State Road Transport Corporation [Ksrtc] — regarding asking the money at ksrtc bus stand majestic | |||||
ಎಲ್ಲೆಲ್ಲಿ ನಾವು ಆಡಳಿತದ ತೂತುಗಳನ್ಧು ಮುಚ್ಚಲು ಸಾಧ್ಯವೋ ಗೊತ್ತಿಲ್ಲ. ಬೆಂಗಳೂರಿನ ksrtc ಬಸ್ ನಿಲ್ದಾಣದಲ್ಲಿ ಇರುವ ಶೌಚಾಲಯದಲ್ಲಿ ನಡೆಯುವ ಹಣ ವಸೂಲಿ ಕ್ರಮವೊಂದನ್ನು ಇಂದು ಎದುರಿಸಬೇಕಾಯ್ತು. ಮಹಿಳೆಯರಿಗೆ ಆರು ರೂಪಾಯಿ ಕಡ್ಡಾಯ ಅಂತ ಅಲ್ಲಿ ವಸೂಲಿ ನಡೆಯುತ್ತಿತ್ತು. ಕೊಡದಿದ್ದ ಪಕ್ಷದಲ್ಲಿ ಅನುಮತಿ ಇಲ್ಲ. * ಇದನ್ನು ನಾನು ಹಾಗು ಸೂರತ್ ಕಲ್ಲಿನ ಡಿಸೋಜಾ ಅವರು, ನಿಯಂತ್ರಣ ವಿಭಾಗಲ್ಲಿ ವಿಚಾರಿಸಿದ್ವಿ. ಬರಲಾರದ ಮನಸ್ಸಿಂದ ಅವರು ಬಂದು ಆ ಹೆಂಗಸನ್ನು ಗದರಿಸಿದ್ರು. ಆಕೆ ಕ್ಷಮಿಸಿ ಸರ್ ಅಂತ ಅವರೆದರು ಹೇಳಿದ್ರು. ನಾವು ಆ ಗುತ್ತಿಗೆದಾರರು ಯಾರು ಅಂತ ಕೇಳಿದಾಗ ಅವರನ್ನು ಕರೆಸಿದರು. ಸಾವಿರಾರು ಜನ ಪ್ರತಿನಿತ್ಯ ಓಡಾಡುವ ಇಂತಹ ಸ್ದಳದಲ್ಲಿ ಈ ರೀತಿಯ ಹಣ ವಸೂಲಿಯಿಂದ ಉತ್ಪತ್ತಿಯಾಗುವ ಹಣ ಎಷ್ಟು ಅಂತ ಕೇಳಿದ್ವಿ. ಈ ಹಣವನ್ನು ಅಧಿಕಾರಿಗಳಿಗೆ ಹಂಚಬೇಕಾಗಿದೆ ಅನ್ನೋ ವಿಚಾರ ತಿಳಿಯಿತು. * ದೂರನ್ನು ಬರೆದು ಅದನ್ನು ಎಂಡಿ. Ksrtc ಅವರಿಗೂ ಪ್ರತಿಯನ್ನು ತಲುಪಿಸುವ ನಿರ್ಧಾರ ಮಾಡಿದ್ವಿ. * ಶೌಚಾಲಯದ ಮುಂಭಾಗ ಹಣವನ್ನು ಕೊಡಬೇಕಾಗಿಲ್ಲ ಅನ್ನುವ ಬೋರ್ಡ್ ಅನ್ನು ಹಾಕುವ ಅಗತ್ಯ ಇರುವುದನ್ನು ದೂರಿನಲ್ಲಿ ಹೇಳಿದ್ವಿ. ವಸೂಲಿ ಕುರಿತಾಗಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ವಿ. * ಬ್ರಂಹ್ಮಾಂಡ ಭ್ರಷ್ಟತೆಯ ಈ ಕಾಲದಲ್ಲಿ ನಾವು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸ್ತಾ ಇದ್ದಂತೆ ಭಾಸವಾಯ್ತು. ಆದರೆ ಅಲ್ಲಿ ವಸೂಲಿ ಹಣ ಹುಟ್ಟುವ ಸಾಮರ್ಥ್ಯ ವು ದೊಡ್ಡಮಟ್ಟದಲ್ಲಿಯೇ ಇತ್ತು. Date 17.12.2018 K. S. R. T. C Was this information helpful? | |||||
Add a Comment | |||||
21%
Complaints
3239
Pending
0
Resolved
687
+91 80 4455 4422
+91 44 2479 4442
+91 77 6099 0035
Koyambedu Bus Terminus Platform No 1, 100 Feet Road Jawaharlal Nehru Salai, Koyambedu, Chennai, Dharwad, Karnataka, India - 600107
Post your Comment