Address: | ALUR BDA FLAT, HUSKUR ROAD, DASANAPURA HOBLI, BANGALORE NORTH. |
ಆಲೂರು ಬಿಡಿಎ ಹಂತ-1 ಹುಸ್ಕೂರ್ ರಸ್ತೆ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು 562123.
ಸ್ವಾಮಿ ನಾನು ಮನೆ ಮಾಲೀಕ ಐದು ವರ್ಷಗಳಿಂದ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು 2022 ಮಾರ್ಚ್ನಲ್ಲಿ ಒಂದು ವಾರಗಳ ಕಾಲ ಕುಡಿಯಲು ಸಹ ನೀರು ಇಲ್ಲದೆ ಪರದಾಡಬೇಕಾದ ಸನ್ನಿವೇಶ ಬಂದಿದ್ದು ತುಂಬಾ ಬೇಸರದ ಸಂಗತಿ ಹಾಗೂ ಬೀದಿದೀಪಗಳ ವಿದ್ಯುಚ್ಛಕ್ತಿಯನ್ನು ಸಹ ದಿನಾಂಕ 15 ಮಾರ್ಚ್ 2021 ರಿಂದ ಇಂದಿನವರೆಗೂ ಬೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿರುತ್ತಾರೆ ಕಾರಣ 1600000 ರೂಪಾಯಿಗಳ ಬೆಸ್ಕಾಂನ ವಿದ್ಯುಚ್ಛಕ್ತಿ ಬಿಲ್ಲಿನ ಬಾಕಿ ಇರುವುದೆಂದು ಆಲೂರು ಬಿಡಿಎ ಹಂತ-1 ಮನೆ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಿಳಿಸಿರುತ್ತಾರೆ, ಇಷ್ಟೊಂದು ದೊಡ್ಡ ಬಾಕಿ ಮೊತ್ತ ಆಗುವವರೆಗೂ ಯಾರಿಗೂ ತಿಳಿಸದೇ ಇರುವುದು ದೊಡ್ಡ ತಪ್ಪು ಆಗಿರುವುದು ಕಂಡುಬರುತ್ತದೆ ನೀರು ಇಲ್ಲದೆ ಮತ್ತು ಬೀದಿದೀಪ ಸಹ ಇಲ್ಲದೆ ಇಲ್ಲಿ ವಾಸವಾಗಿರುವ ವೃದ್ಧಾಪ್ಯ ದವರು, ಅನಾರೋಗ್ಯದವರು, ಒಂಟಿ ಹೆಂಗಸರು, ಮಕ್ಕಳು ಮತ್ತು ಎಲ್ಲಾ ನಿವಾಸಿಗಳಿಗೆ ತುಂಬಾ ಅನಾನುಕೂಲ ಆಗಿರುವುದರಿಂದ ನಮಗೆ ಹಾಲಿ ಇರುವ ಸಂಘದ ಮೇಲೆ ನಂಬಿಕೆ ಇಲ್ಲ ಆದ್ದರಿಂದ ನಮಗೆ ಬಿಡಿಎ ಅಧಿಕಾರಿಗಳಿಗೆ ಕೇಳಿಕೊಳ್ಳುವುದೇನೆಂದರೆ ನಿಮ್ಮ ಸ್ವಾಧೀನಕ್ಕೆ ಪಡೆದು ನೀವೇ ವಹಿಸಿಕೊಂಡು ನಿರ್ವಹಣೆ ಮಾಡಿ ನೀರು ಮತ್ತು ಬೀದಿ ದೀಪಗಳ ಮೂಲಸೌಕರ್ಯ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಹಾಗೂ ಪ್ರತ್ಯೇಕವಾಗಿ ಮೂರನೇ ಮಹಡಿಯಲ್ಲಿ ವಾಸವಾಗಿರುವವರಿಗೆ ನೀರು ಬಾರದ
ಸಮಯದಲ್ಲಿ ನೆಲ ಮಹಡಿಯಿಂದ ಮೂರನೇ ಮಹಡಿಗೆ ನೀರನ್ನು ಹೊತ್ತೊಯ್ಯಲು ತುಂಬಾ ಪ್ರಯಾಸ ವಾಗುವುದು ಆದ್ದರಿಂದ ದಯಮಾಡಿ ಒಂದು ಟ್ಯಾಂಕನ್ನು ಟೆರೆಸ್ ಮೇಲೆ ಅಥವಾ ನೆಲಮಹಡಿಯಲ್ಲಿ ಇಡಲು ಅವಕಾಶ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. Was this information helpful? |
Post your Comment