Address: | Classic Pride Apartment, Classic County Layout, Kommaghatta Road, KS Town, Bangalore - 560060 |
ಮಾನ್ಯರೇ,
ದಿನಾಂಕ ೨೫-೦೬-೨೦೨೦ ರಂದು ಯಶವಂತಪುರ ಕ್ಷೇತ್ರದ ೧೫೯ ನೇ ವಾರ್ಡ್ ಕೆಂಗೇರಿ ಉಪನಗರದಲ್ಲಿ ಸುರಿದ ಬಾರಿ ಮಳೆಯಿಂದ ನಮ್ಮ ಬಡಾವಣೆಯಾದ ಕ್ಲಾಸ್ಸಿಕ್ ಕೌಂಟಿಯಲ್ಲಿ ರಸ್ತೆ ಬಿರುಕು ಬಿಟ್ಟಿದ್ದು ಇದರಿಂದ ನಮ್ಮ ಸುತ್ತ ತಡೆ ಗೋಡೆ ಹಾನಿಯಾಗಿ, ನೆಲ ಮಳಿಗೆಯಲ್ಲಿ ನೀರು ತುಂಬಿ ಬಹಳ ಅವ್ಯವಸ್ಥೆಯಾಗಿದ್ದು ಹಾಗು ನಮ್ಮ ಅಪಾರ್ಟ್ಮೆಂಟ್ ನ ಮುಂದಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ನ ತಳಹದಿ ಪಾಯ ಕೂಡ ಹಾನಿಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ಬಾರಿ ಮಳೆಯಾದರೆ ವಿದ್ಯುತ್ ಟ್ರಾನ್ಸ್ಫಾರ್ಮರ್ ಹಾಗು ತಡೇ ಗೋಡೆ ನೆಲಕುರುಳಿ ಹಾನಿಯಾಗಬಹುದೆಂದು ನಾವು ಬಹಳ ಆತಂಕದಲ್ಲಿದ್ದೇವೆ.
ಕ್ಲಾಸಿಕ್ ಪ್ರೈಡ್ ಅಪಾರ್ಟ್ಮೆಂಟ್ ನಲ್ಲಿ ಮೂವತ್ತು ಕುಟುಂಬದವರು ವಾಸವಿದ್ದು ಇದರಲ್ಲಿ ಹಿರಿಯ ನಾಗರಿಕರು ಹಾಗು ಮಕ್ಕಳು ಕೂಡ ಆತಂಕದಲ್ಲಿದ್ದಾರೆ.
ಹೀಗಾಗಿ ಹಾನಿಯಾಗುವ ಬಗ್ಗೆ ತಮ್ಮ ಗಮನಕ್ಕೆ ತಂದು ಮನವಿಮಾಡುವುದೇನೆಂದೆರೆ ಮಳೆಯ ನೀರು ನೇರವಾಗಿ ನಮ್ಮ ಮನೆ ಹಾಗು ಅಪಾರ್ಟ್ಮೆಂಟ್ ಮುಂದೆ ಬರುವ ನೀರಿಗೆ ಬದಲಿಗೆ ವ್ಯವಸ್ಥೆ ಕಲ್ಪಿಸುವಂತೆ ನಿಮ್ಮ ಬಳಿ ವಿನಂತಿಸಿಕೊಳುತಿದ್ದೇವೆ ಹಾಗು ಇದರಿಂದ ಆಗುವ ತೊಂದೆರೆಯನ್ನು ಪರಿಹರಿಸಿಕೊಡುವಂತೆ ಕೋರಿಕೊಳುತಿದ್ದೇವೆ.
Was this information helpful? |
Post your Comment