Address: | 560066 | Website: | www.consumercomplaints.in/new_complaint |
ಫೆಬ್ರವರಿ 8, 2015 ಸಾಯಂಕಾಲ ನಾನು ಮತ್ತು ನನ್ ಸ್ನೇಹಿತ KA -50 F0155 ಕಾಡುಗೋಡಿಲಿ ಈ ಬಸ್ ಹತ್ಕೊಂಡ್ವಿ.. ಏನ್ ಆಶ್ಚರ್ಯ..!!! ಒಂದು ಸೆಕೆಂಡ್ಗೆ.. ಇದು ಜನರನ್ನ ಹೊಯ್ಯೋ ಬಸ್ಸೋ ಅಥವಾ ಕಸ ಹೊಯ್ಯೋ ಬಸ್ಸೋ ಅಂತ ಗಾಬರಿ ಆಗೋಯ್ತು..!!! ಬರೀ ಕಸ, ಧೂಳು, ಹೊಡೆದಿರೋ ಗಾಜಿನ್ ಚೂರು, ಹಾಳಾಗಿ ಹೋಗ್ಲಿ ಅಂತ ಧೂಳು ಒರೆಸಿ ಕೂತ್ಕೊಳ್ಳೋಣ ಅಂದ್ರೆ ಒಂದು ಸೀಟಾದ್ರು ನೆಟ್ಟಗಿರೋದ್ ಬೇಡ್ವಾ ಎಲ್ಲಾ ಕಿತ್ತೋಗಿರೋ ಸೀಟ್ಗಳು, ತುಕ್ಕು ಹಿಡ್ದಿರೋ ಸೀಟ್ ಕಾಲ್ಗುಳು. ಹಂಗು ಇಂಗು ಸೀಟ್ ಅಡ್ಜಸ್ಟ್ ಮಾಡ್ಕೊಂಡು ಕುಂತ್ರೆ...ಆ ಕಿಟಕಿಗಳಿಂದ ಬರೀ ಮ್ಯುಸಿಕ್ಕು ಮತ್ತೆ ಫುಲ್ಲು AC..!!! ಒಂದು ಕಿಟಕಿ ಗ್ಲಾಸ್ ಆದ್ರು ನೆಟ್ಟಗಿರೋದ್ ಬೇಡ್ವಾ.. ಟೋಟಲ್ಲಾಗಿ ಎಷ್ಟೋ ವರ್ಷಗಳಿಂದ ಸ್ಕ್ರಾಪ್ ನಲ್ಲಿ ಬಿದ್ದಿರೋ ಬಸ್ಸನ್ನ ತರಾತುರಿಲಿ ತಗೊಂಡ್ ಬಂದಾಗಿತ್ತು..(ಹೊಸಕೋಟೆ - ಅತ್ತಿಬೆಲೆ ಮಾರ್ಗ ಡಿಪೋ # 39) ಈ ರೂಟ್ ನಲ್ಲಿ ಕೆಲವೇ ಬಸ್ಸುಗಳು ಒಳ್ಳೆ ಕಂಡೀಶನ್ ನಲ್ಲಿ ಇರೋದು, ಬೇರೆ ಎಲ್ಲಾ ಬಸ್ಸುಗಳನ್ನ ಡೈರೆಕ್ಟ್ ಸ್ಕ್ರಾಪ್ ನಿಂದ ತಂದಿರೋ ಹಾಗಿದೆ, ಸಸ್ಪೆನ್ಶನ್ ಅಂತೂ ಕೇಳಲೇ ಬೇಡಿ..ಹಿಂದೆ ಕೂತ್ಕೊಂಡಿರೋರಿಗಂತೂ ದೇವರೇ ದಿಕ್ಕು...!!!
ಅಂದಹಾಗೆ ನನ್ನ ಪ್ರಶ್ನೆ ಇಷ್ಟೇ ಬಿ ಎಂ ಟಿ ಸಿ ಡಿಪೋನಲ್ಲಿ ಯಾರಾದ್ರು ಕೆಲ್ಸ ಮಾಡ್ತಿದಾರ...???
Was this information helpful? |
Post your Comment