ನಮಸ್ತೆ...
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ, ಹಿರಿಯೂರು ತಾಲೂಕು ಪಂಚಾಯಿತಿಗೆ ಸೇರಿದ ಹೊಸಯಳನಾಡು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಆಲೂರು ಗ್ರಾಮ.
2002-03ನೇ ಸಾಲಿನಲ್ಲಿ ಕಂದಾಯ ಇಲಾಖೆಯಿಂದ ಮಂಜೂರಾದ 30*40 ಅಳತೆಯ ನಿವೇಶನಕ್ಕೆ (ಗ್ರಾಮ ಪಂಚಾಯತ್ ಖಾತೆ ಸಂಖ್ಯೆ 570 ಮತ್ತು ಸ್ವತ್ತಿನ ಸಂಖ್ಯೆ[protected] 2017 ನೇ ಇಸವಿಯಲ್ಲಿ 50*80 ಅಳತೆಯ ಇ ಸ್ವತ್ತು ನೀಡಿದ್ದಾರೆ...ಇದರ ಬಗ್ಗೆ ಚಕ್ಕುಬಂದಿಯವರಾದ ನಮಗೆ ಯಾವುದೇ ಮಾಹಿತಿಯಿಲ್ಲ...2020 ಜೂನ್ ಮಾಹೆಯಲ್ಲಿ ತಕರಾರು ಆದಾಗ ಗೊತ್ತಾಗಿದೆ...
ಆಮೇಲೆ ಜೂನ್ ತಿಂಗಳು 2021 ರಲ್ಲಿ ಅದೇ ನಿವೇಶನಕ್ಕೆ ಪಂಚಾಯಿತಿಯಿಂದ ವಿತರಿಸಿದ ಖಾತಾ ನಕಲನ್ನು ತೋರಿಸಿದ್ದು ಇದು 2014-15ನೇ ಸಾಲಿನದ್ದು ಅಂತ ಹೇಳುತ್ತಿದ್ದಾರೆ...
ಇದರ ಬಗ್ಗೆ PDO ಮತ್ತು EO ಅವರಿಗೆ ಅರ್ಜಿ ಕೊಟ್ಟರೂ ಏನು ಕ್ರಮ ಕೈಗೊಂಡಿಲ್ಲ...
ಈಗ ನನ್ನ ದೂರು ಏನಂದರೆ :-
1)ಒಂದು ಬಾರಿ ಕಂದಾಯ ಇಲಾಖೆಯಿಂದ ಮಂಜೂರಾದ ನಿವೇಶನಕ್ಕೆ ಪಂಚಾಯಿತಿಯಿಂದ D.C.B REGISTER ಖಾತಾ ನಕಲು ವಿತರಿಸಿರುವುದು ಎಷ್ಟು ಸರಿ??
2) 2002 ರಲ್ಲಿ ನೀಡಿದ ಮಂಜೂರಾತಿ ಹಕ್ಕುಪತ್ರ (30*40)ಅಥವಾ 2014-15 ರಲ್ಲಿ ವಿತರಿಸಿದ D.C.B REGISTER(50*80)ನಲ್ಲಿ ಯಾವುದನ್ನು ಪರಿಗಣನೆಗೆ ತಗೊಬೇಕು??
3) ಒಂದು ವೇಳೆ 2014ರಲ್ಲಿ ಇ ಸ್ವತ್ತು ಜಾರಿಯಲ್ಲಿರುತ್ತದೆ, ಖಾತಾ ನಕಲು ವಿತರಿಸಿದ ಮೇಲೆ ಇ ಸ್ವತ್ತು ಯಾಕೆ ನೀಡಿಲ್ಲ??
2017ರಲ್ಲಿ ಇ ಸ್ವತ್ತನ್ನು ಪಡೆದಿರುತ್ತಾರೆ.
4) ಗ್ರಾಮ ಪಂಚಾಯಿತಿ ಅರ್ಜಿ ಕೊಟ್ಟರೂ ದಾಖಲೆಗಳ ಪರಿಶೀಲನೆ ಆಗುತ್ತಿಲ್ಲ...
ದಯವಿಟ್ಟು ಇ ಸ್ವತ್ತಿನಲ್ಲಿರುವ ತಪ್ಪುಗಳನ್ನು ಸರಿಪಡಿಸಿ..
ನಮ್ಮದು 2007-08 ನೇ ಸಾಲಿನಲ್ಲಿ ಖಾತೆ ಆಗಿದೆ..
ನಮ್ಮ ಚಕ್ಕುಬಂದಿಯವರ ನಿವೇಶನ ದಾಖಲೆಗಳ ತಪ್ಪುಗಳಿಂದ ನಮಗೆ ತುಂಬಾ ತೊಂದರೆ ಆಗುತ್ತಿದೆ ನಮ್ಮಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ...
ಅವರ ಮನೆಯಿಂದ 4 ಅಡಿಯಷ್ಟು ಜಾಗ ಬಿಟ್ಟು 2014 ರಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದೇವೆ ಆದರೂ 50*80 ಅಳತೆಯ ದಾಖಲೆ ತೋರಿಸಿ ಗುಡಿಸಲನ್ನು ತೆರವುಗೊಳಿಸಿ ನನ್ನದು ಜಾಗ ಎಂದು ತಕರಾರು ಮಾಡುತ್ತಿದ್ದಾರೆ..ನಮ್ಮ ಗುಡಿಸಲ 2010ರಲ್ಲಿ NBA ಯೋಜನೆ ಅಡಿಯಲ್ಲಿ ನಿರ್ಮಾಣವಾದ ಶೌಚಲಯದ ತುಂಬಾ ಕಸದ ರಾಶಿಯನ್ನು ಹಾಕಿದ್ದಾರೆ ಮತ್ತು ಗುಡಿಸಲ ಮಂದೆ ಕಲ್ಲನ್ನು ಹಾಕಿ ತೆಗೆಯುವುದಿಲ್ಲ ನನ್ನದೆ ಜಾಗ ಎಂದು ದಬ್ಬಾಳಿಕೆ ಮಾಡುತ್ತಾರೆ... Was this information helpful? |
Post your Comment