District commissioner
Mangalore karnataka
Respected sir
ವಿಷಯ,, ಬೆಳ್ಳಾರೆ ಪಂಚಾಯತ್ ನ ನೀರು ಸರಬರಾಜು ಅವ್ಯವಸ್ಥೆಯ ಕುರಿತು
ಸಾರ್..
ಬೆಳ್ಳಾರೆ ಪಂಚಾಯತ್ನ ಗೌರಿ ಹೊಳೆ ಎಂಬ ಸ್ಥಳದಲ್ಲಿ ನೆಲೆಸಿರುವ ಸಾಧಾರಣ ಮೂವತ್ತು ನಲ್ವತ್ತು ಮನೆಗಳು ಬರೀ ಪಂಚಾಯತ್ ನೀರನ್ನು ನಂಬಿರುತ್ತೇವೆ. ಇಲ್ಲಿ ಸರಿಯಾಗಿ ನೀರು ಸರಬರಾಜು ಆಗುವುದಿಲ್ಲ.ನೀರಿಲ್ಲ ಅಂತ ಪಂಚಾಯತ್ ಗೆ ಹೇಳಿದರೆ ನೀರು ಬಿಡುವ ವರಿಗೆ ಹೇಳಿ ಅಂತಾರೆ.ನೀರು ಬಿಡುವ ವರಿಗೆ ಅವರು ನಮಿಗೆ ಯಾಕೆ ಹೇಳ್ತೀರಾ ಅಂತಾರೆ. ಇನ್ನೊಂದು ಸಲ ಕೇಳಿದರೆ ಅವರ ಬಾಯಿಗೆ ಬಂದದನ್ನೆಲ್ಲಾ ಬೈಸಿಕೊಳ್ಳಬೇಕು.ನಮ್ಮ ಬೋರ್ ಮೋಟಾರ್ ಗೆ ಅಟೋ ಸ್ಟಾರ್ಟರ್ ಸಿಕ್ಕಿಸಿಲ್ಲ.ದಿನದಲ್ಲಿ ತುಂಬಾ ಸಲ ಕರೆಂಟ್ ಹೋಗುತ್ತದೆ.ಒಂದುಸಲ ಕರೆಂಟ್ ಹೋದರೆ ಇನ್ನೊಂದು ಸಲ ಸ್ವಿಚ್ ಹಾಕೋದಿಲ್ಲ. ಹತ್ತಿರ ಬಾವಿ ಇರುವ ಮನೆ ಯವರು ಒಂದೆರಡು ದಿವಸ ಕೊಡುತ್ತಾರೆ.ಮೂರನೆ ದಿವಸ ಯಾರು ಕೊಡುತ್ತಾರೆ.ಇನ್ನು ಬೇಸಿಗೆ ಕಾಲದಲ್ಲಿ ನೀರು ಯಾರು ಕೊಡೋದಿಲ್ಲ.ತುಂಬಾ ಬೇಜವಾಬ್ದಾರಿ ಇರುವವರ ಕೈ ಯಲ್ಲಿ ನೀರು ಬಿಡುವ ಮೋಟಾರ್ ನ ಕೀ ಕೊಟ್ಟಿರುತ್ತಾರೆ.ಅವರು ಅವರ ಮನೆಯಲ್ಲಿರವುದೇ ಕಡಿಮೆ.ಅವರೆಷ್ಟು ದಿನವಿಲ್ಲವೋ ಅಷ್ಟು ದಿನ ನೀರಿಗಾಗಿ ಕಾಯಬೇಕು.
ನೀರಿನ ಬೋರ್ ಮೋಟಾರ್ ಕೆಟ್ಟು ಹೋದರೆ ಹತ್ತು ದಿನಗಳು ನೀರಿಲ್ಲ.ನಾವೆಲ್ಲಾ ತುಂಬಾ ಬೊಬ್ಬೆ ಹೊಡೆದರೇ ಮಾತ್ರ ಮೆಲ್ಲಗೆ ರಿಪೇರಿ ಶುರು ಮಾಡುತ್ತಾರೆ.ಮೂರು ತಿಂಗಳಿಗೊಂದು ಸಲ ಕೆಟ್ಟು ಹೋಗುವುದು ಗೇರಂಟಿ.
ನಾವೆಲ್ಲರೂ ಬೋರ್ ಬಾವಿ ತೆಗೆಸುವಷ್ಟು ಸಾಮರ್ಥ್ಯ ವಿಲ್ಲದವರು.ತುಂಬಾ ವರ್ಷ ದಿಂದ ನೀರಿನ ಸಮಸ್ಯೆ ಯಿಂದ ಬಳಲುತ್ತಿದ್ದೇವೆ.
ದಯವಿಟ್ಟು ಗೌರವಾನ್ವಿತ ರಾದ ತಾವುಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು.ಮತ್ತು ಪರಿಶೀಲಿಸುವ ವ್ಯವಸ್ಥೆ ಮಾಡಬೇಕು. ಎಲ್ಲಾ ಕಡೆ ನಮ್ಮ ಕಷ್ಟ ವನ್ನು ಹೇಳಿ ಏನೂ ಪ್ರಯೋಜನವಾಗಲಿಲ್ಲ ಸಾರ್.
ಕೊನೆಯದಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತಾ ಇದ್ದೇವೆ. ತಾವುಗಳು ನಮಗೆ ನ್ಯಾಯ ಕೊಡಿಸಬೇಕು ಸಾರ್.ನಮ್ಮ ಪಂಚಾಯತ್ ಬೋರಲ್ಲಿ ನೀರು ದೇವರು ಕೊಟ್ಟರೂ ಇವರು ಮಾತ್ರ ನಮಿಗೆ ಕೊಡ್ತಾ ಇಲ್ಲ.
ಈ ಸಮಸ್ಯೆ ಯನ್ನು ಸರಿಪಡಿಸಿದರೆ ಸಾರ್ ತಮ್ಮ ಹೆಸರು ಹೇಳಿ ನೆಮ್ಮದಿಯಿಂದ ಜೀವಸುತ್ತೇವೆ ಸಾರ್.
ಸಾರ್ ನಮ್ಮ ಬೇಡಿಕೆಗಳು.
1.ಪಂಚಾಯತ್ ವತಿಯಿಂದ ನೀರು ಬಿಡುವ ವ್ಯವಸ್ಥೆ ಸಂಬಳ ಕೊಟ್ಟು ಮಾಡಿಸಬೇಕು.ಯಾವುದೇ ಮನೆಯವರಿಗೆ ವಹಿಸಬಾರದು.
2.ಅಟೋ ಸ್ಟಾರ್ಟರ್ ಸಿಕ್ಕಿಸಬೇಕು.ಇಲ್ಲದಿದ್ದರೆ ಎಷ್ಟು ಸಲ ಕರೆಂಟ್ ಹೋಯ್ತೋ ಅಷ್ಟು ಸಲ ಆ ಸಮಯದಲ್ಲಿ ಸ್ವಿಚ್ ಹಾಕಬೇಕು.ಕರೆಂಟ್ ಇಲ್ಲದ ಸಮಯವನ್ನು ಲೆಕ್ಕ ಹಾಕಿ ಅಷ್ಟು ಹೊತ್ತು ಜಾಸ್ತಿ ನೀರು ಬಿಡಬೇಕು.
3.ಹಳೆ ಕಾಲದ ಮೋಟಾರ್ ಬದಲಾಯಿಸಿ ನವೀನ ಮಾದರಿಯ ಬೋರ್ ಮೋಟಾರ್ ಹಾಕಬೇಕು.
4.ಮೋಟಾರ್ ಕೆಟ್ಟು ಹೋದರೆ ಕೂಡಲೇ ರಿಪೇರಿ ಮಾಡಬೇಕು.
5.ನೀರು ಬಿಡವವರು ರಜೆ ಆದರೆ ಬೇರೆ ಜನರ ವ್ಯವಸ್ಥೆ ಮಾಡಬೇಕು.
ಇಷ್ಟು ಜನರ ಪರವಾಗಿ ನಾನು ತಮ್ಮ ಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಸಾರ್.
ಇಸ್ಮಾಯಿಲ್ ಪಿ
ಗೌರಿ ಹೊಳೆ ಮನೆ.
ಬೆಳ್ಳಾರೆ ಅಂಚೆ. ಸುಳ್ಯ ತಾಲ್ಲೂಕು. ಮಂಗಳೂರು [protected]
Was this information helpful?