| Address: ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ಕಸಬಾ ಹೋಬಳಿ, ಬಾಚೇನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವರದೇನಹಳ್ಳಿ ಗ್ರಾಮ |
ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ಕಸಬಾ ಹೋಬಳಿ, ಬಾಚೇನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವರದೇನಹಳ್ಳಿ ಗ್ರಾಮದಲ್ಲಿ 2016-17 ನೇ ಸಾಲಿನಲ್ಲಿ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿ ಸಾರ್ವಜನಿಕ ರಸ್ತೆಗೆ ಕಾಂಕ್ರೀಟ್ ರಸ್ತೆಯನ್ನು ಗ್ರಾಮ ಪಂಚಾಯತಿ ಅನುದಾನದಲ್ಲಿ ಸರ್ಕಾರದ ಹಣದಿಂದ ಮಾಡಿಸಲಾಗಿರುತ್ತದೆ.
ಸದರಿ ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಯಾದ ರಂಗಸ್ವಾಮಿ ಬಿನ್ ಲೇಟ್ ರಂಗಯ್ಯ ರವರು ಒತ್ತುವರಿ ಮಾಡಿಕೊಂಡು ತನ್ನ ಕುಟುಂಬಸ್ತರಾದ ನರಸಮ್ಮ ಕೋಂ ಲೇಟ್ ಸಣ್ಣರಂಗಯ್ಯ ರವರ ಹೆಸರಿಗೆ ಅಕ್ರಮವಾಗಿ ಖಾತೆಯನ್ನು ಮಾಡಿಸಿಕೊಡಿರುತ್ತಾರೆ. ಕಳೆದ ಮೂರು ತಿಂಗಳಿಂದ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಟ್ಟಡವನ್ನು ಕಟ್ಟಿ ಸಾರ್ವಜನಿಕರು ತಿರುಗಾಡದಂತೆ ತೊಂದರೆಯನ್ನು ಕೊಡುತ್ತಿರುತ್ತಾರೆ ಈ ಸಂಬಂಧ ಸ್ಥಳೀಯ ಸರ್ಕಾರಗಳಾದ ಗ್ರಾ. ಪಂ, ತಾಲ್ಲೂಕಿನ, ಜಿಲ್ಲೆಯ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ಗಮನಕ್ಕೆ ತಂದರು ನ್ಯಾಯವನ್ನು ಕೋರಿದರು ಯಾವುದೆ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿರುವುದಿಲ್ಲ, ಸರ್ಕಾರದ ವಿಳಂಭ ದೊರಣೆಯಿಂದ ಗ್ರಾಮದ ಸಾರ್ವಜನಿಕರು ಬೇಸತ್ತು ಹೋಗಿದ್ದೇವೆ, ಹಾಗು ದಿನಾಂಕ[protected] ರಂದು ಶ್ರೀಯುತ.ಪುಟ್ಟರಾಮಯ್ಯ, ಪಿಡಿಓ ರವರ ಸಹಕಾರದೊಂದಿಗೆ[protected] ಮತ್ತು[protected] ರಂದು ಸರ್ಕಾರಿ ರಜೆ ಇರುವ ಕಾರಣ ಸದರಿ ರಸ್ತೆಗೆ ರಾತ್ರಿ ವೇಳೆ ಟ್ರ್ಯಾಕ್ಟರ್ ಮೂಲಕ ಮಣ್ಣನ್ನು ಮುಚ್ಚಿ ಅಡ್ಡಲಾಗಿ ಕಲ್ಲುಗಳನ್ನು ಜೋಡಿಸಿರುತ್ತಾರೆ, ಮೂಲ ಭೂತ ಸೌಕರ್ಯಗಳನ್ನು ಒದಗಿಸಬೇಕಾದ ಸ್ಥಳಿಯ ಸರ್ಕಾರದ ಗ್ರಾಮ ಪಂಚಾಯತಿ ಅಧಿಕಾರಿಗಳೆ ಈ ರೀತಿಯಾಗಿ ಮಾನವ ಹಕ್ಕುಗಳನ್ನು ತೇಜೋವಧೆಯನ್ನು ಮಾಡಿ ಇವುಗಳನ್ನು ದ್ವಂಸಗೊಳಿಸುವ ಕೆಲಸಕ್ಕೆ ಮುಂದಾಗಿರುವುದು ಜನ ವಿರೋಧಿ ಕೃತ್ಯವಾಗಿದ್ದು, ಸಾರ್ವಜನಿಕ ಸೇವಾ ವಲಯದಲ್ಲಿ ಸೇವೆ ಸಲ್ಲಿಸಲು ಅಸಮರ್ಥರಾಗಿರುತ್ತಾರೆ, ಖಾಸಗಿ ವ್ಯಕ್ತಿಯೊಂದಿಗೆ ಶಾಮೀಲಾಗಿ ಇವರ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಪಾಲುದಾರಿಕೆ ವಹಿಸುತ್ತಿರುವ ಪಿಡಿಓ ರಾದ ಶ್ರೀಯುತ. ಪುಟ್ಟರಾಮಯ್ಯ ರವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡು, ಅಕ್ರಮ ಖಾತೆಯಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ಸರ್ಕಾರಿ ಆಸ್ತಿಯನ್ನು ಕಬಳಿಸಿರುವ ಖಾಸಗಿ ವ್ಯಕ್ತಿಯಾದ ರಂಗಸ್ವಾಮಿ ಬಿನ್ ಲೇಟ್ ರಂಗಯ್ಯ ರವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸಾರ್ವಜನಿಕರು ಸರ್ಕಾರಿ ರಸ್ತೆಯಲ್ಲಿ ಮುಕ್ತವಾಗಿ ತಿರುಗಾಡಲು ಹಾಗೂ ಈ ಉಸಿರುಗಟ್ಟಿರುವ ವಾತಾವರಣದಿಂದ ಮುಕ್ತರನ್ನಾಗಿಸಲು ತಾವುಗಳು ಅನುಕೂಲ ಮಾಡಿಕೊಡಬೇಕೆಂದು ಕೋರುತ್ತೇವೆ.
ಇಂತಿ ಗ್ರಾಮಸ್ಥರುಗಳು.
*ಫೋಟೋ ಪ್ರತಿಯನ್ನು ಲಗಟ್ಟಿಸಿರುತ್ತೇವೆ.
Was this information helpful? |
Post your Comment