Dear Sir/Ma'am,
I have applied for learning licence some days back and there is continous problem in the upload of the documents. At first i uploaded the documents and the profile showed that documents are not signed, then second time it showed that documents are not clear, and the third time i uploaded the documents, it's been almost 4 days, but still no updates and the status is pending. I request you to kindly look into the matter.
Thank you
RTO India customer support has been notified about the posted complaint.
ಸರ್ ನನ್ನ ಹೆಸರು ಶುಭಾ ಅಂತ, ಧಾರವಾಡದ, ಹಳಿಯಾಳ ನಾಕಾ ನಿವಾಸಿ ಹಾಗೂ ಸರಕಾರಿ ಸೇವಕ ಳು.. ಈಗ ನಾನು ಹಾಕುತ್ತಿರುವ ದೂರು ಎನೆಂದರೆ ಈ ಚಿತ್ರದಲ್ಲಿರುವ ಗಾಡಿಯ ಆ ಯುವಕ ಪ್ರತಿ ದಿನ ನನ್ನ ಮನೆ ಬಾಗಿಲಿಗೆ ಈ ರೀತಿಯಾಗಿ ಗಾಡಿ ನಿಲ್ಲಿಸಿತ್ತಾನೆ.. ಅಲ್ಲದೆ ಎಷ್ಟೋ ಬಾರಿ ನಮ್ಮ ಗಾಡಿಗಳನ್ನು ದಬ್ಬಿ ತನ್ನ ಗಾಡಿಯನ್ನು ಅಡ್ಡಲಾಗಿ ನಿಲ್ಲಿ ಹೋಗಿದ್ದೂ ಇದೆ. ಇವತ್ತು ಇನ್ನಷ್ಟು ಅತಿರೇಕದಿಂದ ಮನೆಯ ಬಾಗಿಲಲ್ಲಿ ಹೊರ ಸಾಗಿಸಲು ಇಟ್ಟೊದ್ದ ಮಂಚವನ್ನು ಗೇಟಿಗೆ ಜೋರಾಗಿ ಬಿಸಾಕಿ, ನಮ್ಮ ಗುಡಿಯನ್ನು ಸಹ ತೆಗೆದು ದಬ್ಬಿ ಇಟ್ಟು ತನ್ನ ಕೆಲಸ ಸಾಧಿಸಿದ್ದು ಇಲ್ಲಿ ಹಾಕಿರುವೆ. ಏನು ಹೇಳುವ ಹಾಗಿಲ್ಲ ಕೇಳುವ ಹಾಗಿಲ್ಲ.. ವಾರಗಂಟಲೆ ಗಾಡಿ ತೆಗೆಯದ ದಿನಗಳೂ ಇವೆ .. ಗಾಡಿ ಸಂ:KA25C0160
ಎತಕ್ಕೆ ಹೀಗೆ ಎಂದು ಕೇಳಿದರೆ ಗುಂಪು ಗೂಡಿ ಮನೆ ಒಳಗೆ ನುಗ್ಗಿ ವಯಸ್ಸಾದವರಾಗಿರಲಿ, ಹೆಣ್ಣುಮಕ್ಕಳು ಎನ್ನದೇ ದಾಳಿ ಮಾಡಿ ಕೊಲೆ ಮಾಡುವ ಬೆದರಿಕೆ ಸಹ ಹಾಕುತ್ತಾರೆ. ಪೋಲೀಸರು ಸಹ ಸಾಕಷ್ಟು ಹೇಳಿ ಹೋಗಿದ್ದಾರೆ.. ಆದರೂ ಇವರ ನಡವಳಿಕೆ ಹೀಗೇಯೇ ಇದೆ.. ದಯವಿಟ್ಟು ಇವರಿಂದ ಇವರ ಈ ದೌರ್ಜನ್ಯದಿಂದ ಬಿಡುಗಡೆ ಕೊಡಿಸಿ.. ಬೇರೆ ದಾರಿ ಇಲ್ಲದೆ ನಿಮ್ಮಲ್ಲಿ ಈ ರೀತಿಯಾಗಿ ಯಾಚನೆ ಮಾಡುತ್ತಿದ್ದೇನೆ.🙏
ಇಲ್ಲಿ ಬೇರೆ ಮಕ್ಕಳು, ಬೇರೆ ಹೆಣ್ಣುಮಕ್ಕಳು ಯಾರೂ ಮೈಚಳಿ ಬಿಟ್ಟು ಓಡಾಡುವುದು ಆಡುವುದೂ ಇಲ್ಲಿ ಸಾಧ್ಯವಿಲ್ಲ, ರಾತ್ರಿ ಹನ್ನೆರಡು ಗಂಟೆಯಾದರೂ ಮನೆ ಮುಂದೆ ಗುಂಪುಗಟ್ಟಿ ಗದ್ದಲ ಇದ್ದೇ ಇರುತ್ತದೆ . ಇದೇ ಕಾರಣಕ್ಕೆ ಇಲ್ಲಿ ಯಾರೂ ಮಾತಾಡದೇ, ಇವರ ಬಾಗಿಲು ಮುಚ್ಚಿ, ಮಕ್ಕಳೆಲ್ಲವನ್ನ ಒಳಗೇ ಕೂಡಿ ಹಾಕಿ ಸಾಕುವ ಪರಿಸ್ಥಿತಿ.. ಇದರಿಂದ ನಮಗೆ ಯಾವಾಗ ಬಿಡುಗಡೆ? ಯಾವಾಗ ನೆಮ್ಮದಿ ಜೀವನ... ದಯವಿಟ್ಟು ತಾವಾದರೂ ಇಲ್ಲಿ ನಾವು ನೆಮ್ಮದಿ ಯ ಬದುಕು ಜೀವಿಸಲು ಅವಕಾಶ ಮಾಡಿ ಕೊಡಿ..