| Address: Tumkur, Karnataka, 572137 |
ಈ ಮೇಲ್ಕಂಡ ವಿಷ್ಯಕ್ಕೆ ಸಂಬಂಧ ಪಟ್ಟಂತೆ BM ದಾಕ್ಷಾಯಿಣಿ 65 ವರ್ಷದ, ವಿದ್ಯಾ ನಗರ, ಸಿರಾ ವಾಸಿಯಾದ ನಾನು ಹೇಳುವುದೇನೆಂದರೆ ದಿನಾಂಕ 26/08 /2018 ಸಂಜೆ ಸುಮಾರು 7 :30 ಕ್ಕೆ ತುಮಕೂರಿನಿಂದ ಸಿರಾ ಕಡೆ ಹೊರಡುವ ಬಸ್ಸಿನಲ್ಲಿ ನಿರ್ವಾಹಕಿಯ ಅನುಚಿತ ವರ್ತನೆ ಹೇಗಿತ್ತೆಂದರೆ ನನ್ನ 5 ವರ್ಷದ 10 ತಿಂಗಳ ಮೊಮ್ಮಗನಿಗೆ ಟಿಕೆಟ್ ಕೇಳಿದಳು, ನಾನು 6 ವರ್ಷದ ನಂತರ ಟಿಕೆಟ್ ತೆಗೆದುಕೊಳ್ಳಬೇಕಲ್ಲ ಎಂದು ಪ್ರಶ್ನಿಸಿದಕ್ಕೆ ನನಗೆ ಎಕಾ ಏಕಿ ಹಿರಿಯ ನಾಗರಿಕರು ಎಂದು ಲೆಕ್ಕಿಸದೆ ಏಕ ವಚನದಲ್ಲಿ ನಿಂದಿಸಿ, ಇಲ್ಲೇ ಇಳಿದುಕೊ ಎಂದು ಬಸ್ಸನ್ನು ಕತ್ತಲಲ್ಲಿ ನಡು ರಸ್ತೆಯಲ್ಲಿ ನಿಲ್ಲಿಸಿ ಕೂಗಾಡಿ ರಂಪ ಮಾಡಿರುತ್ತಾಳೆ ಇದಕ್ಕೆ ಚಾಲಕನು ಸಹಕರಿಸಿರುತ್ತಾನೆ, ನನ್ನ ಮೊಮ್ಮಗನಿಗೂ ನೀನು ಸ್ಕೂಲ್ಗೆ ಹೋಗಬೇಡ ಮನೆಗೆ ಇರು ಎಂದು ಬೆದರಿಸಿದಳು ನನ್ನ ಮೊಮ್ಮಗ ಕೂಡ ಅಳುತ್ತಾ ನಿಂತನು . ಕಡೆಗೆ ಸಹ ಪ್ರಯಾಣಿಕರು ನಿರ್ವಾಹಕಿಯ ವರ್ತನೆಗೆ ಶಪಿಸುತ್ತಾ ಟಿಕೆಟ್ ತೆಗೆದು ಕೊಳ್ಳಿ ಎಂದಾಗ ನನ್ನ ಬಳಿ ಇದ್ದ Rs 50 /- ನೋಟನ್ನು ಕಿತ್ತುಕೊಂಡು ಟಿಕೆಟ್ ಕೊಟ್ಟಳು, ನಾನು ಮಾನಸಿಕವಾಗಿ ಬಹಳ ನೊಂದುಕೊಂಡು ಹಾಗು ವಯೋಸಹಜವಾಗಿ ಕಣ್ಣು ಕಾಣದ್ದರಿಂದ ಟಿಕೆಟ್ ಅನ್ನು ಗಮನಿಸಲಿಲ್ಲ 50 ರುಪಾಯಿಗೆ ಟಿಕೆಟ್ ಕೊಟ್ಟಿದ್ದೀಯಾ ಎಂದು ಕೇಳಿದ್ದಕ್ಕೆ ಕಣ್ಣು ಕಾಣುವುದಿಲ್ಲವಾ ಕೊಟ್ಟಿದ್ದೇನೆ ನೋಡಿಕೋ ಎಂದು ಅಂದಳು . ನಾನು ಸುಮ್ಮನಾಗಿ ಮನೆಗೆ ಬಂದು ನನ್ನ ಟಿಕೆಟ್ ನೋಡಿದರೆ ಅದು 30 ರುಪಾಯಿಯ ಟಿಕೆಟ್ ಆಗಿದೆ, 30 ರುಪಾಯಿಯ(Rs 30/-) ಟಿಕೆಟ್ ಕೊಟ್ಟು 50 ರೂಪಾಯಿ (Rs 50/-) ತೆಗೆದುಕೊಂಡು ನನಗೂ ನನ್ನ ಮೊಮ್ಮಗನಿಗೂ ಮಾನಸಿಕವಾಗಿ ಹಿಂಸೆ ಕೊಟ್ಟು, ಎಲ್ಲರೆದುರು ಅವಮಾನ ಮಾಡಿ, ಮೋಸ ಮಾಡಿ, ಸಾರಿಗೆ ಇಲಾಖೆಗೂ ನಷ್ಟ ಉಂಟು ಮಾಡಿದ್ದಾಳೆ, ಹಾಗಾಗಿ ಇಂತಹವರ ವರ್ತನೆಯಿಂದ ಸಂಸ್ಥೆಗೂ, ಸರ್ಕಾರಕ್ಕೂ ಕೆಟ್ಟ ಹೆಸರಿನ ಜೊತೆಗೆ ನಷ್ಟವುಂಟಾಗುತ್ತದೆ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆ .
ಟಿಕೆಟ್ ನಂ: 178339, 26/08/2018. 19:41:48 time, KA 06 F 0809, ಡಾಕ್ಯುಮೆಂಟ್ ನಂ : 844
ಅವಶ್ಯವಿದ್ದಲ್ಲಿ ನನ್ನ ಮೊಮ್ಮಗನ ಜನನ ಪ್ರಮಾಣ ಪತ್ರ ಲಗ್ಗತ್ತಿಸುತ್ತೇನೆ ಆತನ ಜನ್ಮ ದಿನಾಂಕ 23/09/2012
Kindly please investigate the hotel service and tender details unfallowings here i dont able to take food plz cancel the tender of chikkanayakanahalli depo hotel and plz arrange other services for passengers '
Your obidently
Chetanraj LN