| Address: S/O Chikkathimmegowda Handanakere Tumakuru district 572119 |
Respected Sir,
ಹಂದನಕೆರೆಯು ತುಮಕೂರು ಜಿಲ್ಲೆಯ ಗಡಿ ಭಾಗದ ದೊಡ್ಡ ಹೋಬಳಿ ಕೇಂದ್ರ. ಮತ್ತು ಸುತ್ತಲ 10-15 ಹಳ್ಳಿಗಳ ಕೇಂದ್ರವು ಹೌದು.ಬಸ್ ಸೌಲಭ್ಯ ಬಹಳ ಕಡಿಮೆ. ಹಂದನಕೆರೆ ಮಾರ್ಗ ತುಮಕೂರು ಮತ್ತು ಬೆಂಗಳೂರು ಕಡೆಗೆ ಬೆಳಗಿನ 7.30ರ ನಂತರ ರಾತ್ರಿ 10.40ರ ವರೆಗೂ ಬಸ್ಸುಗಳಿಲ್ಲ.ಈ ಮೊದಲು ಬೆಳಿಗ್ಗೆ 6, 9 ಮತ್ತು 12-30ಕ್ಕೆ ಬೆಂಗಳೂರಿಗೆ ಹಂದನಕೆರೆ ಮಾರ್ಗವಾಗಿ ಬಸ್ಸುಗಳಿದ್ದವು. ಈಗ ಬಸ್ಸುಗಳಿಲ್ಲದಿರುವುದರಿಂದ ಪ್ರಯಾಣಿಕರ ಬವಣೆ ಹೇಳತೀರದು. ಹೊಸದುರ್ಗದಿಂದ ಬೆಂಗಳೂರಿಗೆ ಹುಳಿಯಾರು ಮಾರ್ಗ ಸಾಕಷ್ಟು ಬಸ್ಸುಗಳಿದ್ದು, ಕೆಲವೊಮ್ಮೆ 10 ನಿಮಿಷಗಳ ಅವಧಿಯಲ್ಲಿ 2-3 ಬಸ್ಸುಗಳು ಸಂಚರಿಸುತ್ತವೆ. ಬಯಲು ಸೀಮೆಯ ವೈಕುಂಠವೆಂದೇ ಪ್ರಸಿದ್ಧವಾಗಿರುವ
ಶ್ರೀಗವಿರಂಗನಾಥ ಕ್ಷೇತ್ರಕ್ಕೂ ಬಸ್ ಸೌಲಭ್ಯ ಹೆಚ್ಚಿಸಬೇಕಿದೆ.
1. ಕ ರಾ ರ ಸಾ ನಿಗಮದ ತುರುವೇಕೆರೆ ಡಿಪೋದವರು ಓಡಿಸುತ್ತಿರುವ ಹೊಸದುರ್ಗ -ಬೆಂಗಳೂರು ಬಸ್ಸನ್ನು ಗವಿರಂಗನಾಥ ಕ್ಷೇತ್ರ, ಹಂದನಕೆರೆ, ಚಿ ನಾ ಹಳ್ಳಿ ಮಾರ್ಗವಾಗಿಯೂ ಓಡಿಸಬೇಕೆಂದು ಈ ಬಸ್ಸು ಹೊಸದುರ್ಗವನ್ನು ಬೆಳಿಗ್ಗೆ 10 ಗಂಟೆಗೆ ಬಿಡುತ್ತದೆ.
2. ತುರುವೇಕೆರೆ ಡಿಪೋದವರು ಓಡಿಸುತ್ತಿರುವ
ಬೆಂಗಳೂರು -ಹೊಸದುರ್ಗ -ದಾವಣಗೆರೆ ಬಸ್ಸನ್ನು ಚಿ ನಾ ಹಳ್ಳಿ, ಹಂದನಕೆರೆ, ಶ್ರೀ ಗವಿರಂಗನಾಥಕ್ಷೇತ್ರ, ಹೊಳಲ್ಕೆರೆ ಮಾರ್ಗವಾಗಿ ಓಡಿಸಬೇಕೆಂದು ಈ ಬಸ್ಸು ಚಿ ನಾ ಹಳ್ಳಿಯನ್ನು ಸಂಜೆ 4 ಗಂಟೆಗೆ ಬಿಡುತ್ತದೆ. ಈ ಬಸ್ಸುಗಳನ್ನು ಹಂದನಕೆರೆ ಮತ್ತು ಗವಿರಂಗನಾಥಕ್ಷೇತ್ರ ಮಾರ್ಗ ಓಡಿಸುವುದರಿಂದ ಪ್ರಯಾಣದ ದೂರ ಮತ್ತು ದರದಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ.ಮತ್ತು ಹುಳಿಯಾರು ಮಾರ್ಗದಲ್ಲಿ ಸಾಕಷ್ಟು ಬಸ್ಸುಗಳು ಸಂಚರಿಸುವುದರಿಂದ ಆ ಭಾಗದ ಪ್ರಯಾಣಿಕರಿಗೂ
ತೊಂದರೆಯಾಗುವುದಿಲ್ಲ.
3. ಹೊಸದುರ್ಗ ಡಿಪೋದವರು ಓಡಿಸುತ್ತಿರುವ ಹೊಸದುರ್ಗ - ಬೆಂಗಳೂರು ಬಸ್ ಒಂದನ್ನು ಹಂದನಕೆರೆ, ಚಿ ನಾ ಹಳ್ಳಿ, ತುಮಕೂರು ಮಾರ್ಗವಾಗಿಯೂ ಓಡಿಸಬೇಕೆಂದು ಈ ಬಸ್ಸು ಹೊಸದುರ್ಗವನ್ನು ಬೆಳಿಗ್ಗೆ 7.30ಕ್ಕೆ ಬಿಡುವಂತಿರಲಿ.
4. ಹೊಸದುರ್ಗ ಡಿಪೋದವರು ಓಡಿಸುತ್ತಿರುವ
ಶಿವಮೊಗ್ಗ - ಹೊಸದುರ್ಗ - ಬೆಂಗಳೂರು ಬಸ್ಸನ್ನು ಹುಳಿಯಾರು ಮಾರ್ಗದ ಬದಲಾಗಿ ಗವಿರಂಗನಾಥಕ್ಷೇತ್ರ, ಹಂದನಕೆರೆ, ಚಿ ನಾ ಹಳ್ಳಿ
ಮಾರ್ಗವಾಗಿ ಓಡಿಸಬೇಕೆಂದೂ,
5. ತುಮಕೂರು ಡಿಪೋದವರು ಒಂದು ಬಸ್ಸನ್ನು
ತುಮಕೂರು -ಚಿ ನಾ ಹಳ್ಳಿ - ಧರ್ಮಸ್ಥಳ
ಚೇಳೂರು, ಹೊಸಕೆರೆ, ಹಂದನಕೆರೆ, (ಮಾಡಾಳು, ಕಣಕಟ್ಟೆ, ) ಸಿಂಗಟಗೆರೆ, ಕಡೂರು, ಚಿಕ್ಕಮಗಳೂರು ಮಾರ್ಗವಾಗಿ ಓಡಿಸಲು ಕ್ರಮ ಕೈಗೊಳ್ಳ ಬೇಕೆಂದು ಪ್ರಾರ್ಥನೆ.
ಇಂತಿ ತಮ್ಮ ವಿದೇಯ
ಪುಟ್ಟಯ್ಯ ಸಿ ಹಂದನಕೆರೆ.
ಚಿಕ್ಕನಾಯಕನಹಳ್ಳಿ ತಾಲೂಕು
ತುಮಕೂರು ಜಿಲ್ಲೆ 572119